Wednesday 8 January 2014

ಕನ್ನಡವೆ ಸತ್ಯ ಕನ್ನಡವೆ ನಿತ್ಯ.



           ಕನ್ನಡ ಭಾಷೆಯು ಸುಮಾರು 2000 ವರ್ಷಗಳ ಪುರಾತನ ಭಾಷೆಯು ಮತ್ತು ಭಾರತದ 3ನೇ ಹಳೆಯ ಭಾಷೆ ಆಗಿದೆ. ಇದು ದ್ರಾವಿಡ ವರ್ಗಕ್ಕೆ ಸೇರಿದ ದಕ್ಷಿಣ ಭಾರತದ ಭಾಷೆಗಳಲ್ಲೊಂದು. ಕರ್ನಾಟಕದಲ್ಲಿ ಸುಮಾರು 3.8 ಕೋಟಿ ಜನ ಇದನ್ನು ಪ್ರಥಮ ಭಾಷೆ ಆಗಿಯೂ 1 ಕೋಟಿ ಜನ ದ್ವಿತೀಯ ಭಾಷೆ ಆಗಿಯೂ  ಮಾತನಾಡುತ್ತಾರೆ. ಭಾರತ ಸರ್ಕಾರ ಇದನ್ನು 2008 ರಲ್ಲಿ ಶಾಸ್ತೀಯ ಭಾಷೆ ಎಂದು ಗುರುತಿಸಿದೆ. ಇದು ದ್ರಾವಿಡ ವರ್ಗಕ್ಕೆ ಸೇರಿದ ಎರಡನೇ ಪ್ರಾಚೀನ ಭಾಷೆ(ತಮಿಳಿನ ನಂತರ). ಕನ್ನಡ ಭಾಷೆಯ ಪ್ರಥಮ ಲಿಖಿತ ಕುರುಹೆಂದರೆ ಕ್ರಿ ಶ 450ರ  ಹಲ್ಮಿಡಿ ಶಾಸನ. ಕನ್ನಡ ಮತ್ತು ತೆಲುಗು ಭಾಷೆಗಳೆರಡರ ಲಿಪಿಗಳು ಕನರೆಸೆ ಲಿಪಿಯಿಂದ ಹುಟ್ಟಿಕೊಂಡಿವೆ ಇದರಿಂದಾಗಿ ಹೋಲಿಕೆಯಲ್ಲಿ ಒಂದೇ ಆಗಿವೆ.
ಕನ್ನಡವು ವಿವೇಚನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ 99.99% ಸಂಪೂರ್ಣವಾಗಿರುವ ಭಾಷೆ , ಅಂದರೆ ಎಲ್ಲ ಆಡುವ ಮಾತುಗಳನ್ನು ನಾವು ಬರವಣಿಗೆಯಲ್ಲಿ ವ್ಯಕ್ತಪಡಿಸಬಹುದು ಹಾಗೂ ಎಲ್ಲ ಬರಹವನ್ನು ಉಚ್ಚರಿಸಬಹುದು. 
ಕರ್ನಾಟಕದ ಇನ್ನೂ ಎರಡು ಪ್ರಮುಖ ಭಾಷೆಗಳಾದ ತುಳು ಮತ್ತು ಕೊಂಕಣಿ ಭಾಷೆಗಳು ಕನ್ನಡ ಲಿಪಿಯನ್ನೇ ಅವಲಂಬಿಸಿವೆ.
ಕನ್ನಡ ಭಾಷೆ 35 ವ್ಯಂಜನಗಳನ್ನು ಮತ್ತು 13 ಸ್ವರಗಳನ್ನು ಒಳಗೊಂಡಿದೆ.

ಕನ್ನಡವನ್ನು ಕಾಲಕ್ಕನುಸಾರವಾಗಿ 3 ವಿಧಗಳಾಗಿ ವಿಂಗಡಿಸಬಹುದು 
1.ಹಳೆಗನ್ನಡ(ಕ್ರಿ ಶ 450-1400)
2.ನಡುಗನ್ನಡ(ಕ್ರಿ ಶ 1200-1700)
3.ಹೊಸಗನ್ನಡ(ಕ್ರಿ ಶ 1800ರಿಂದ ಈವರೆಗೆ)

ಹಳೆಗನ್ನಡ

ಇದು 5ನೇ ಶತಮಾನದಲ್ಲಿ ಬನವಾಸಿ ಕದಂಬರ ಆಳ್ವಿಕೆಯಿಂದ 14ನೇ ಶತಮಾನಾದವರೆಗೆ ಚಾಲ್ತಿಯಲ್ಲಿತ್ತು. ಹಾಸನ ಜಿಲ್ಲೆಯ ಹಲ್ಮಿಡಿ ಎಂಬಲ್ಲಿ ದೊರೆತ ಶಾಸನ ಹಳೆಗನ್ನಡದಲ್ಲಿ ಬರೆಯಲ್ಪಟ್ಟಿದೆ.
ಈ ಶಾಸನವನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು 16 ಸಾಲುಗಳನ್ನು ಹೊಂದಿದೆ. ಈ ಶಾಸನ 5 ನೇ ಶತಮಾನದಲ್ಲೇ ಕನ್ನಡ ಆಡಳಿತ ಭಾಷೆ ಆಗಿತ್ತೆಂಬುದನ್ನು ತೋರಿಸುತ್ತದೆ. 
ಕನ್ನಡದ ಪ್ರಥಮ ಕೃತಿ ಎಂದರೆ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ(ಕ್ರಿ ಶ 850).
ಪಂಪ,ರನ್ನ,ಜನ್ನ ಈ ಅವದಿಯವರು.ಪಂಪನನ್ನು ಕನ್ನಡದ ಆದಿ ಕವಿ ಎಂದು ಕರೆಯುತ್ತಾರೆ.
ಹಳೆಗನ್ನಡ 12ನೇ ಶತಮಾನದಿಂದ ವಿಶಿಷ್ಟ ವಿದದ ಸಾಹಿತ್ಯವಾಗಿ ರೂಪ ತಾಳಿತು ಅವುಗಳಲ್ಲಿ ಹರಿಹರನ ರಗಳೆ,ರಾಘವಾಂಕನ ಷಟ್ಪದಿ ಮತ್ತು ವಚನ ಸಾಹಿತ್ಯ ಪ್ರಮುಖವು. ಬಸವಣ್ಣ ,ಅಲ್ಲಮ ಪ್ರಭು, ಅಕ್ಕಮಹಾದೇವಿ ಮುಂತಾದವರು ಸಾವಿರಾರು ವಚನಗಳನ್ನು ರಚಿಸಿದ್ದಾರೆ.

ನಡುಗನ್ನಡ

15 ರಿಂದ 18 ನೇ ಶತಮಾನದವರೆಗೆ ಹಳೆಗನ್ನಡ ಅನೇಕ ಬದಲಾವಣೆ ಹೊಂದಿತು. ಕುಮಾರವ್ಯಾಸ ಈ  ಸಾಹಿತ್ಯದ ಶ್ರೇಷ್ಟ ಕವಿ. ಅವನ ಕಮಟ ಭಾರತ ಕಥಾಮಂಜರಿ (ಗದುಗಿನ ಭಾರತ) ಪ್ರಮುಖ ಕೃತಿ. ಕನಕದಾಸ,ಪುರಂದರದಾಸ ಇನ್ನೂ ಮುಂತಾದ ಸಾದು ಸಂತರು ಹರಿದಾಸ ಸಾಹಿತ್ಯವನ್ನು  ಹುಟ್ಟುಹಾಕಿ ಕನ್ನಡದಲ್ಲಿ ಭಕ್ತಿ ಗೀತೆಗಳನ್ನು ರಚಿಸಿದರು.

ಹೊಸಗನ್ನಡ

19ನೇ ಶತಮಾನದಿಂದ ಈವರೆಗೆ ರಚನೆಯಾದ ಸಾಹಿತ್ಯವೇ ಹೊಸಗನ್ನಡ ಸಾಹಿತ್ಯ. ಕುವೆಂಪು,ಬೇಂದ್ರೆ, ಜಿ ಎಸ್ ಶಿವರುದ್ರಪ್ಪ ಇನ್ನೂ ಮುಂತಾದ ಕವಿಗಳು ಕನ್ನಡ ಸಾಹಿತ್ಯವನ್ನು ಬೆಳೆಸಿ ದೇಶದಾದ್ಯಂತ ಕನ್ನಡದ ಹಿರಿಮೆಯನ್ನು ಮೆರೆದಿದ್ದಾರೆ.
ಭಾರತದ ಅತಿ ಪ್ರತಿಷ್ಟೆಯ ಸಾಹಿತ್ಯ ಪ್ರಶಸ್ತಿಗಲ್ಲಿ ಒಂದಾದ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ 8 ಬಾರಿ ಪಡೆದಿದೆ, ಇದು ಭಾರತದ ಎಲ್ಲ ಭಾಷೆಗಳಿಗಿಂತಲೂ ಹೆಚ್ಚು. ಭಾರತದ 6 ರಾಷ್ಟ್ರ ಕವಿಗಳಲ್ಲಿ 3 ಕವಿಗಳು(ಗೋವಿಂದ ಪೈ,ಕುವೆಂಪು ಮತ್ತು ಜಿ ಎಸ್ ಶಿವರುದ್ರಪ್ಪ ) ಕನ್ನಡದವರು ಎಂಬುದು ಹೆಮ್ಮೆಯ ವಿಷಯ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು